
ಕಾಮನಬಿಲ್ಲಿಗೆ ಸಾವಿರ ರಂಗು ಸೇರಿಸಾಯಿತು!!
ಒಲವೆಂಬ ಪ್ರವಾಹಕ್ಕೆ ಕಟ್ಟೆ ಕಟ್ಟಲೊಲ್ಲೆ...
ಗರಿಗೆದರಿ ನಲಿಯುವ ನವಿಲಿಗೆ ಸ್ಪರ್ಧಿಸಲಾ ...?
ಭ್ರಮೆಯಲ್ಲ ಇದು ...
ನನಸಾಗುವ ಕನಸು ..
ಆಗ ಹಂಬಲಿಸದ ಚಿತ್ತಾರವಿದು..
ಈಗ ಇದುವೇ ನನ್ನ ಹಸ್ತಾಕ್ಷರ ..
ರವಿ ತಾರೆ ಚಂದಮಾಮರೆ ಸಾಕ್ಷಿ ..
ಬೇರೇನೂ ಬೇಕಿಲ್ಲ ಈ ಜಗದ ಮುದ್ರೆ ..
ಪರಿಶುಧ್ಧ ಒಲುಮೆಯಿದು ಪರಮಾತ್ಮನೇ ಸಾಟಿ..
ಈ ಪಯಣ ಸಾಗಲಿ ಎಲ್ಲಾ ಪ್ರತಿಷ್ಠೆಗಳ ದಾಟಿ ದಾಟಿ ...