Friday, April 29, 2011

ನೀನೇ ಕಾರಣ ??


ಮುಂಗುರುಳ ಜೊತೆ ತುಂಟಾಟ ಆಡುತ್ತ
ಕಳೆದು ಹೋದೆ ..
ದೂರದ ಆಗಸದಲ್ಲಿ ಸ್ವಚ್ಛಂದ ಹಾರಾಟದ
ಕನಸು ಕಣ್ಮುಂದೆ ...
ಪದೇ ಪದೇ ಕಿರು ನಗು ಮೂಡಿಸುವ
ಬೆಚ್ಚನೆಯ ನೆನಪು ನಿಂದೆ ..
ಮುದ ನೀಡುವ ಹುಚ್ಚು ಭಾವಗಳ
ಆಕರ ಪ್ರೀತಿಯೊಂದೆ ..
ಈ ಕ್ಷಣದ ಸೊಗಸ ಬಣ್ಣನೆಗೆ
ಪದಗಳೇ ಕಾಣೆ .
ಇದು ಸುಳ್ಳಲ್ಲ,
ನಿನ್ನಾಣೆ..







Wednesday, April 6, 2011

ನಿನಗೆ ..

ನಾನೀಗ ಜಗಳ ಕಾಯುವವಳಿದ್ದೇನೆ..

ನೋವಿನಲ್ಲಿ, ನಗುವಿನಲ್ಲಿ
ಹಸಿವಿನಲ್ಲಿ ,ದಣಿವಿನಲ್ಲಿ
ನೆನಪಾಗುತ್ತಿಯಲ್ಲ
"ಅಮ್ಮನಂತೆ.."

ಏಕಾಂತದಲ್ಲಿ, ಸಂತೆಯಲ್ಲಿ
ಕನಸಿನಲ್ಲಿ, ಕನವರಿಕೆಯಲ್ಲಿ
ಎಲ್ಲೆಲ್ಲೂ ಯಾಕೆ
ಆವರಿಸಿಕೊಂಡಿರುವೆ
..?

ಕಣ್ಣಂಚಿನ ಆ ಹನಿಯಲ್ಲೂ
ಮನದೊಳಗಿನ ಭಾವಚಿತ್ರದಲ್ಲೂ,
ನೀನೆ ತಾನೆ ನಗುತಿರುವವನು ..?

ಏನು ತಿಳಿಯದಂತೆ ಸುಮ್ಮನೆ ಕೂತಿದ್ದು
ನನ್ನ ಮನದ ಪುಟಗಳನ್ನೆಲ್ಲಾ
ಪ್ರೀತಿಯಿಂದ ಓದಿಕೊಂಡು ಸಮಾಧಾನಿಸುವೆಯಲ್ಲ??

ನನ್ನ ಚುಟುಕು ಪ್ರಶ್ನೆಗಳಿಗೆ
ಒಲವಿನ ಮಳೆಗೈದು ಓಲೈಸುವೆಯ ?
ಸಣ್ಣ ನಗು ಸೂಸಿ ಮೌನ ತಾಳುವೆಯ ?
ಕಾಣದ ಭವಿಷ್ಯದಲ್ಲಿ ಉತ್ತರ ಹುಡುಕಾಡುವೆಯ?
ನಿನಗಿದೆಲ್ಲ ಗೊತ್ತು ಅನ್ನುವುದನ್ನರಿತೆ
ನಾ - ಜಗಳ ಕಾಯುವವಳಿದ್ದೇನೆ.....