Thursday, June 16, 2011

ಹೇಗಾದೆ ..??



ಅರಸದೆ,
ದಾರಿಯಲ್ಲಿ ಸಿಕ್ಕ ಆಗಂತುಕ ನೀನು ..
ಅಚ್ಚರಿ ಪಟ್ಟಿರಲಿಲ್ಲ ನಾನು ..
ಪದಪುಂಜಗಳಿಂದ ರಮಿಸುವ
ಕವಿ ನೀನಾಗಲಿಲ್ಲ..
ನಿತ್ಯ ಕಂಡು ಸ್ವಾಗತಿಸುವ
ರವಿ ನೀನಾಗಲಿಲ್ಲ ..
ತಂಪು ಸೂಸಿ ಕಾವ್ಯ ಪಸರಿಸುವ
ಶಶಿ ನೀನಾದೆ ..
ಭಾವನೆಗಳ ಗೆಲ್ಲುವ
ಶೂರ ನೀನಾಗಲಿಲ್ಲ ..
ಮದದಿಂದ ಗೆಲ್ಲುವ
ಧೀರ ನೀನಾಗಲಿಲ್ಲ ..
ತುಂಬುಗಣ್ಣಿನ ಬಿಳಿ ಹವಳಗಳ ನಗುವಿನ
ಮೌನಿ ನೀನಾದೆ ..
ಪ್ರೇಮಗಾನದ ಒಡೆಯ
ನೀನಾಗಲಿಲ್ಲ ..
ಹೃದಯ ವೀಣೆಯ ಮೀಟಿದ
ನಾಯಕ ನೀನಾದೆ ..
ಏನಾದೆ ಏನಿಲ್ಲಗಳ
ಪರಿವೆ ನನಗಿಲ್ಲ ..
ಜೀವಕ್ಕೆ ಅಂಟಿದೆ,
ಜಂಟಿಯಾದೆ..
ನೀನೇ ನಾನಾದೆ..?
ನಾನೇ ನೀನಾದೆ.. ?

Monday, June 13, 2011

WED-2011 motivated by forests



Yes, I do remember how excited I was and willing to take up something seriously about it. I even had written down in my own language whatever i was thinking, instantly. Yep, that still makes me feel fantastic. Few years ago, on the same occasion, the thought of it had driven me crazy.

That was about the oceans!! Wanted! Seas & Oceans -Dead or Alive?

Wow, so cherishing lines they were just to go through them once now, after all these years.

The current theme is about the forests!!!!Forest: Nature at your service.

My little thoughts about the vast forest :

The forest just doesn’t indicate bunch of trees. It is about the natural resources, wildlife, rivers, tribes and the biodiversity associated with it. The rains, storm, fire, air everything is in the forest.
We are so much dependent on the forests.

A trip to a deep forest will remain a dream for the future generation.Everyone knows and thinks about it. But, somewhere we’re not attempting to the extent it takes us to replenish everything or it has crossed the limits & nowhere we are left with any option to make it the way it was???
Currently,the rate of consumption is more than the production because of the ever increasing population on the planet.Also the modern life style adds to it. It starts with the buildings we choose to live in,the design of it, the facilities it consists of,the way we utilize / maintain all these technologies,amenities etc.There so many factors which contribute to the decreased value of forest.

If we don’t respect nature it will stop serving human kinds. We can’t buy one more servant like nature at any cost!!!!

Eco-living is the only way to create greener future and preserve expensive treasure “Nature”.

Saturday, June 4, 2011

ಪ್ರೇಮಗಂಗೆ




ಸ್ನೇಹದ ಮಳೆಬಿಲ್ಲು
ಸೂರ್ಯರಶ್ಮಿಯೊಂದಿಗಿನ ಮಿಲನದ ಪರಿಣಾಮ ..
ಮುತ್ತಿನ ಹನಿ ಕೆನ್ನೆ ಮೇಲೆ ಬಿದ್ದಾಗ
ಅನುರಾಗದ ಅನುಭವ..
ಪ್ರೀತಿಯ ಮಳೆಯಲ್ಲಿ ಮಿಂದಾಗ
ಪರಿಶುಧ್ಧವಾದ ಅನುಭವ..
ಒಲುಮೆಯ ಪ್ರವಾಹದಲ್ಲಿ ತೇಲುವಾಗ
ಚಲನಶೀಲತೆಯ ಅನುಭವ..
ಪ್ರೇಮದ ಚಿಲುಮೆ
ಬಾವಿಯ ಸಿಹಿನೀರಿನ ಸಿಂಚನದ ತಂಪು ..
ದಿಟ್ಟ ಚೆಲುವು ಒಲವು
ಸುಪ್ತ ಅಂತರ್ಜಲದ ಸಂಕೇತ
ಎಲ್ಲಾ ಸೇರಿ ಜೀವನ ಸಮುದ್ರದ
ವಿಶಾಲತೆಯ ಅನುಭವ ..
ಮತ್ತೆ ಜೀವ ಹಗುರವಾಗಿ ಹಾರಿದಾಗ
ಜೀವಜಲದ ಬರುವಿಕೆಗೆ ಕಾತುರ ..


--
Sandhya!!

Friday, April 29, 2011

ನೀನೇ ಕಾರಣ ??


ಮುಂಗುರುಳ ಜೊತೆ ತುಂಟಾಟ ಆಡುತ್ತ
ಕಳೆದು ಹೋದೆ ..
ದೂರದ ಆಗಸದಲ್ಲಿ ಸ್ವಚ್ಛಂದ ಹಾರಾಟದ
ಕನಸು ಕಣ್ಮುಂದೆ ...
ಪದೇ ಪದೇ ಕಿರು ನಗು ಮೂಡಿಸುವ
ಬೆಚ್ಚನೆಯ ನೆನಪು ನಿಂದೆ ..
ಮುದ ನೀಡುವ ಹುಚ್ಚು ಭಾವಗಳ
ಆಕರ ಪ್ರೀತಿಯೊಂದೆ ..
ಈ ಕ್ಷಣದ ಸೊಗಸ ಬಣ್ಣನೆಗೆ
ಪದಗಳೇ ಕಾಣೆ .
ಇದು ಸುಳ್ಳಲ್ಲ,
ನಿನ್ನಾಣೆ..







Wednesday, April 6, 2011

ನಿನಗೆ ..

ನಾನೀಗ ಜಗಳ ಕಾಯುವವಳಿದ್ದೇನೆ..

ನೋವಿನಲ್ಲಿ, ನಗುವಿನಲ್ಲಿ
ಹಸಿವಿನಲ್ಲಿ ,ದಣಿವಿನಲ್ಲಿ
ನೆನಪಾಗುತ್ತಿಯಲ್ಲ
"ಅಮ್ಮನಂತೆ.."

ಏಕಾಂತದಲ್ಲಿ, ಸಂತೆಯಲ್ಲಿ
ಕನಸಿನಲ್ಲಿ, ಕನವರಿಕೆಯಲ್ಲಿ
ಎಲ್ಲೆಲ್ಲೂ ಯಾಕೆ
ಆವರಿಸಿಕೊಂಡಿರುವೆ
..?

ಕಣ್ಣಂಚಿನ ಆ ಹನಿಯಲ್ಲೂ
ಮನದೊಳಗಿನ ಭಾವಚಿತ್ರದಲ್ಲೂ,
ನೀನೆ ತಾನೆ ನಗುತಿರುವವನು ..?

ಏನು ತಿಳಿಯದಂತೆ ಸುಮ್ಮನೆ ಕೂತಿದ್ದು
ನನ್ನ ಮನದ ಪುಟಗಳನ್ನೆಲ್ಲಾ
ಪ್ರೀತಿಯಿಂದ ಓದಿಕೊಂಡು ಸಮಾಧಾನಿಸುವೆಯಲ್ಲ??

ನನ್ನ ಚುಟುಕು ಪ್ರಶ್ನೆಗಳಿಗೆ
ಒಲವಿನ ಮಳೆಗೈದು ಓಲೈಸುವೆಯ ?
ಸಣ್ಣ ನಗು ಸೂಸಿ ಮೌನ ತಾಳುವೆಯ ?
ಕಾಣದ ಭವಿಷ್ಯದಲ್ಲಿ ಉತ್ತರ ಹುಡುಕಾಡುವೆಯ?
ನಿನಗಿದೆಲ್ಲ ಗೊತ್ತು ಅನ್ನುವುದನ್ನರಿತೆ
ನಾ - ಜಗಳ ಕಾಯುವವಳಿದ್ದೇನೆ.....


Thursday, March 24, 2011

SOMEಶೋಧನೆ ..




ಕನ್ನಡಿ ಹರಳು ಚೂರು ಚೂರಾದಾಗ ಕಾಣುವ ಬಿಂಬಗಳಿಗೆ ಲೆಕ್ಕವಿಲ್ಲ ...
ಆದರವು ಪರಿಪೂರ್ಣ ಬಿಂಬಗಳೇ..?
ಮಾತುಗಳನ್ನ ಅರ್ಥೈಸಿ ಕೊಳ್ಳದವರು,
ಮಿಡಿತಗಳ ಗಾನವನ್ನು ಗ್ರಹಿಸುವರೆ ?
ನದಿಯ ಪ್ರವಾಹಕ್ಕೆ ಕೊಚ್ಚಿ ಹೋಗುವಾಗ,
ಕಡಲಲೆಗಳ ರುದ್ರ ನರ್ತನಕ್ಕೆ ತಡೆ ಒಡ್ಡಲು ಜೀವಿಸಲಾಗುವುದೇ?
ಜೀವಕ್ಕೆ ಜೀವದ ಹಂಬಲ ಸಿಗದಾಗ ,
ಮೃಷ್ಟಾನ್ನ ಭೋಜನಗಳು ಹಸಿವನ್ನು ತಣಿಸಲು ಪ್ರಯತ್ನಿಸಿ ಸೋಲಬಹುದಷ್ಟೇ..
ಬಾಳದೋಣಿಯನ್ನು ಹಗುರವಾಗಿಸಲು
ಕನಸು,ಮನಸು,ಪ್ರೀತಿಯ ಅಲೆಗಳೇ ನಾಜೂಕು ಸಲಕರಣೆಗಳ?..

Friday, February 11, 2011

ಚಿಲಿಪಿಲಿ


ನೀರಸ ಯಾಂತ್ರಿಕ ಬದುಕಿಗೊಂದು ಅಲ್ಪ ವಿರಾಮ ಒದಗಿಸಿತ್ತು , ಆ ಮುದ್ದು ಕಿಲ ಕಿಲ ನಗು ಎಂದರೆ ಉತ್ಪ್ರೇಕ್ಷೆ ಆಗಲಾರದೇನೋ .. ದಣಿದ ಮನಗಳಿಗೆ ಮುದ ನೀಡಿದ್ದವು ಆ ಕೆಲ ನಿಮಿಷಗಳು.. ಮುಗ್ಧ ಮುಖ, ಹುರುಪಿನ ವ್ಯಕ್ತಿತ್ವ , ಶುಭ್ರ ಹಾವಭಾವ .. ಎಂಥ ಸುಂದರ ಘಳಿಗೆಗಳು ... ಅಂಥ ಕಿಕ್ಕಿರಿದ್ದ ಬಸ್ ಅಲ್ಲಿ ಮಧುರ ಕಲರವ .. ಸುಳಿವಿಲ್ಲದೆಯೇ ನೆರೆದಿರುವ ಮುಖಗಳಲ್ಲಿ ನಗುವಿನ ದರ್ಶನ .. ಯಾರೋ ಕೇಳಿದರು ಆ ಮಗುವನ್ನ , "ನಿನ್ನ ಹೆಸರೇನಮ್ಮ??" .. ಅವಳು ಹೇಳಿದಳು "ಹೇ ಹೇ ..ನನ್ನ ಹೆಸರು ಗುಂಡಮ್ಮ .." .. ಏನೋ ಖುಷಿಯ ಅಲೆಗಳನ್ನ ಎಬ್ಬಿಸಿದವು ಆ ಚುಟುಕಾದ, ಚುರುಕಿನ ಪ್ರತ್ಯುತ್ತರ .. ಸುಡುಬಿಸಿಲಿನಲ್ಲಿ ತಂಗಾಳಿಯ ಅನುಭವ ಆದ ಹಾಗೆ.. ಟ್ರಾಫಿಕ್ ಇಂದ ಬೇಸತ್ತ ಜನರಿಗೆ ಏನೋ ಮನರಂಜನೆ.. ಆ ಪುಟ್ಟಮಕ್ಕಳ ಜಗಳ, ಮಾತುಕತೆ, ತುಂಟ ಪ್ರಶ್ನೆಗಳ ಸರಮಾಲೆ, ಕಲ್ಪನಾ ಲೋಕಗಳ ಅನುಭೂತಿ ಇಂದ ವಂಚಿತಳಾದ ಹಾಗೆ ಅನಿಸುತ್ತಾ ಇತ್ತು ..ನನಗೆ ಅವರ ಹತ್ತಿರದ ಸೀಟ್ ಸಿಗದೇ ಹೋದ್ದರಿಂದ ...ಮಕ್ಕಳು ಬಸ್ ಇಳಿದು ಹೋದಾಗ ಮತ್ತೆ ಉದಾಸ ಭಾವ ಮುತ್ತುಕೊಳ್ಳುವಂತೆ ಭಾಸವಾಗ್ತಾ ಇತ್ತು ..

ಅವರು ಕೆಳಗೆ ಇಳಿದು ಹೋಗುವಾಗ ಒಂದ್ಸಲ ಪ್ರೀತಿಯಿಂದ ಒಬ್ಬಳ ಮುಖವನ್ನ ಸವರಿದಾಗ ಆ ಸ್ಪರ್ಶ " miss you ಪುಟ್ಟಿ " ಅಂತಾ ಹೇಳಿದ್ದು ಮಗುವಿಗೆ ಅರ್ಥವಾಗಿರಲಿಕ್ಕಿಲ್ಲ .. ಅವರ ಹತ್ತಿರ ಕುಳಿತಿದ್ದ ನನ್ನ ಗೆಳತಿ ಒಬ್ಬಳು ಹೇಳಿದಳು , ಎಷ್ಟು ಚೆಂದ time ಪಾಸು ಆಯ್ತು ಗೊತ್ತ ಅಂತಾ .. ಒಬ್ಬ ಮಗು ಹೇಳ್ತಿದ್ಲಂತೆ, ನಾನು ಮನೆ ಕಟ್ಟಿಸ್ತೀನಿ ಅಂತಾ.. "ಹೌದಾ, ಹೇಗೆ?" .. "ಏನಿಲ್ಲ ಗೋಡೆ, ನೆಲ, ಬಾತ್ ರೂಂ , ಅಡ್ಗೆ ಮನೆ ಮಾಡಿದ್ರಾಯ್ತು .. " .. " ಒಹ್, ಹೇಗೆ ಅದನ್ನೆಲ್ಲ ಜೋಡಿಸ್ತಿಯ ..? " .." ಏನಿಲ್ಲ , ಫೆವಿಕೊಲ್ ದು ಒಂದು machine ತರ್ತೀನಿ, ಅದು ಎಲ್ಲಾ ಮಾಡಿಬಿಡುತ್ತೆ .."

ನಮಗೆ ಅಂಥ ಮುಗ್ಧ ಭಾವನೆಗಳು ಮತ್ತೆ ಬರಲಾರವೇನೋ ... :( ... जाने कन्हा गए वो दिन ...

Monday, January 24, 2011

When I see myself in your eyes,
I find myself so beautiful...!!!

When You call my name with such a love,
I start liking it very much...!!

I am happy with the silence,
When you're making noise in my heart as beats..!!!

I love myself the most because of you... :)

Tuesday, January 11, 2011


ನಿನ್ನ ನಗು-ಆ ಹೂವಿನ ಸೊಬಗು ..
ನಿನ್ನ ಮನಸು- ಆ ಮಗುವಿನ ಕೋಮಲತೆ ..
ನಿನ್ನ ಹುಸಿಮುನಿಸು - ಆ ಇಂದ್ರ ಧನಸ್ಸು ..
ನಿನ್ನ ನೋಟ - ಸುಳಿ ಮಿಂಚು ..
ನಿನ್ನ ಕಣ್ಣಿನ ಹೊಳಪು - ಆ ಚಂದಮಾಮನ ತುಂಟ ನೆನಪು ..
ನಿನ್ನ ಪ್ರೀತಿ - ಈ ಪುಟಾಣಿ ಜೀವ ..
ನಿನ್ನ ಸ್ಪರ್ಶ - ಮಮತೆಯ ಹೊದಿಕೆ ..
ನಿನ್ನ ಘಮ - ಈ ಉಸಿರು ..
ನಿನ್ನ ಮಾತು - ಈ ಹೃದಯ ಬಡಿತ ..
ನಿನ್ನ ಭಾವ - ಈ ಅಂತರಂಗ ..
ನಮ್ಮೀ ಬದುಕು ಸುಮಧುರ ಗಾನ ..
ಇವೆಲ್ಲ ನಿತ್ಯ ಸತ್ಯ ಸುಂದರ...!!!