
ಮನದೊಳಗೇನಿದೆ....??
ಇದೊಂದು ಪೆಟ್ಟಿಗೆಯೇ??
ಕಂತೆ ಕಂತೆ ನೆನಪುಗಳು...
ಹತ್ತು ಹಲವು ನೋವುಗಳು......
ಬಣ್ಣ ಬಣ್ಣದ ಸವಿಗನಸುಗಳು.....
ಹಂಬಲಿಸದ ರಹಸ್ಯಗಳು......
ಪ್ರೀತಿಯ ಭಾವನೆಗಳು....
ಇನ್ನೂ ಲೋಕವನ್ನು ಕಾಣದ ಬಗೆ ಬಗೆಯ ಯೋಚನೆಗಳು....,
ಅಸಹಾಯಕತೆಯನ್ನು ಪ್ರತಿಧ್ವನಿಸುವ ವಿಚಾರಗಳು.....
ಏನಿಲ್ಲ ಇದರಲ್ಲಿ...??
ಅದರ ಗಾತ್ರವೇನು??
'ಮನ'ದ ಅವಕಾಶವೆಷ್ಟು ....??
ಯಾರು ಬಲ್ಲರು ಇದರ ರಚನೆಯನ್ನು...??
ಯಾರು ಅಳೆವರು ಇದರ ಸಾಮರ್ಥ್ಯವನ್ನು...??
ದಿನದಿನಾಲು ಪರೀಕ್ಷೆ ಬರೆಯುವಾಗ,
ಪಲಿತಾಂಶದ ಬಗ್ಗೆ ಚಿಂತೆಯಿರದೆ??
ಎಲ್ಲವನ್ನೂ ತನ್ನಲ್ಲಿ ಹುದುಗಿರುವ ಇದರ ಶಕ್ತಿ ಎಷ್ಟು?
