
ಜನರ ದೃಷ್ಟಿ ಬೇರೆ, ವೈಯಕ್ತಿಕ ದೃಷ್ಟಿ ಬೇರೆ. ಆದರೆ ಲೋಕದ ಕಣ್ಣಿಗೆ ಬೀಳುವುದು ವೈಯಕ್ತಿಕ ದೃಷ್ಟಿಯ ವೈಫಲ್ಯ ಮಾತ್ರ?? ಸಾಮಾನ್ಯ ಜನರ, ಸಾಮಾನ್ಯ ಜೀವನದ ಅಂಶಗಳು ಹತೋಟಿ ತಪ್ಪಿದಾಗ ಲೋಕದ ಕಣ್ಣು ಇದನ್ನೇ ದುರುಗುಟ್ಟಿ ನೋಡುವುದೇಕೆ?? ಈ ಗಾಲಿ ತಪ್ಪಿದ ಗಾಡಿಯ ಬಿಡಿ ಭಾಗಗಳು ಪರೀಕ್ಷೆಗೊಳಪಡುತ್ತವೆ, ಸಾರ್ವಜನಿಕವಾಗಿ ........!!!
ಅದು ನಿಜವಾದ ಪರೀಕ್ಷೆಯೇ?? ಲೋಕದ ಕಣ್ಣಲ್ಲಿ ಗುರುತಿಸಲ್ಪಟ್ಟ ಅಂಶಗಳ ಪ್ರತಿಫಲನ, ವೈಯಕ್ತಿಕ ದೃಷ್ಟಿಕೋನವನ್ನು ಬುಡಮೇಲು ಮಾಡುವಷ್ಟು ಪ್ರಭಾವಶಾಲಿಯೇ ??? ಚಿತ್ರಣವನ್ನು ಬದಲಾಯಿಸಲು ಪ್ರಯತ್ನಿಸುವುದು ಸಹಜವೆನಿಸಿದರೂ, ವಿಮರ್ಶೆ ಮಾಡಿ ಪರಿಸ್ಥಿತಿಯನ್ನು ಸಮಗೊಳಿಸುವುದು ಉತ್ತಮ.. ತೀರ ಅಪ್ರಬುದ್ಧವೆನಿಸಿದರಷ್ಟೇ, ಲೋಕದ ಕಣ್ಣಿಗೆ ಹೇಗೆ ದೃಶ್ಯ ಸುಂದರವಾಗಿ ತೋಚಬಹುದು ಎಂದು ಅವಲೋಕಿಸಿ ನಮ್ಮ ಕಾರ್ಯ ಕೈಗೊಳ್ಳಬೇಕು.....
ನಿನ್ನ ಕಣ್ಣಿಗೆ ಕಾಣುವ "ಲೋಕವು" ನಿಜವಲ್ಲ..... ಲೋಕದ ಕಣ್ಣಿಗೆ ಕಾಣುವ "ನೀನು" ನಿಜವಲ್ಲ........ನಿಜವಲ್ಲದ ನಿಜವನ್ನು ನಂಬಿ ಬಾಳ್ವೆ ನಡೆಸುವವರು ನಾವು.......!!!! ಅದು ಸಹಜ ಜೀವನದ ಗುರುತು........!!!!
Very true ....
ReplyDelete"loka"da kannige bari tappugalu maatra kaanistu..because everyone likes finding some one elses mistake rather than their own.
Nice article..