ಅದೇನು ವಿಚಿತ್ರವಲ್ಲದ ವಿಚಿತ್ರವಲ್ಲ !!! ಆದರೂ, ನನಗನಿಸದ, ಅರ್ಥೈಸಿಕೊಳ್ಳಲಾಗದ, ಒಪ್ಪಿಕೊಳ್ಳಲಾಗದ ಕೆಲವು ಮಿಥ್ಯವಲ್ಲದ ಅಂಶಗಳು ...ಸತ್ಯಾಂಶಗಳು ........!! ಯಾಕೆ ಇವೆಲ್ಲವುಗಳ ಪ್ರಭಾವಕ್ಕೆ ಒಳಗಾಗಿ, ಅವ್ಯಕ್ತ ಭಾವನೆಗಳ ಸುಳಿಗೆ ಸಿಲುಕಿ ಅದನ್ನು ಸುಖಿಸಲು ಇಷ್ಟ ಪಡುತ್ತೇವೆ...!!
ಮುಕ್ತವಾದ ಪ್ರಪಂಚದಲ್ಲಿ, ವಿಮುಕ್ತವಾಗಿ ವಿಹರಿಸುವ, ಪ್ರಪ್ಹುಲ್ಲತೆಯಿಂದ ಸಂಚರಿಸುವ, ಮುಗ್ಧ - ಮೂಕ ಮನಸ್ಸಿನ ಅನೇಕ ಮುಖಗಳನ್ನು ಅರಿಯುವ, ವಿವಿಧ ಬಗೆಯ ಜೀವಿ- ಜೀವನಗಳನ್ನು ಸ್ಪರ್ಶಿಸುವ, ಮೃದುವಾಗಿ ಪರೀಕ್ಷಿಸುವ, ನನ್ನನ್ನು ಇವೆಲ್ಲವುಗಳಲ್ಲಿ ಕಂಡುಕೊಳ್ಳುವ ಒಂದು ಅವಕಾಶಕ್ಕಾಗಿ ಆಶಯಿಸಬಹುದು.........ನಿಜವಾದ, ಪ್ರೀತಿಯ ಜಗತ್ತನ್ನು ನನ್ನ ನಯನಗಳಲ್ಲಿ ಕಾಣಬಹುದು..... ಮಧುರವಾದ ಮನಸ್ಸಿನ ಕಣ್ಣುಗಳಲ್ಲಿ ಕಾಣುವ ಪ್ರತಿಬಿಂಬಗಳು, ಮಾಧುರ್ಯದ ಪ್ರತಿರೂಪಗಳೇ........ಹ್ಮ್ಮ್....... !!
No comments:
Post a Comment