ಬಾ ಒಮ್ಮೆ ನನ್ನ ಜೊತೆ ..ಕಳೆದ ಬಾಲ್ಯ- ಕಲಿತ ಶಾಲೆ ,
ಆಡಿದ ಅಂಗಳ -ಪ್ರೀತಿಯ ಗೆಳೆಯರು,
ಬಿರು ಮಳೆ - ಕಪ್ಪು ಬಂಡೆಗಳ ಹಾಸು..
ಎಲ್ಲ ವಿವರಿಸುವೆ ..
ಹಸಿರು ತೋಟ, ಪುಟ್ಟ ಕಾಲುವೆ
ಎಲ್ಲ ಸುತ್ತುವಾಸೆ ನಿನ್ನೊಂದಿಗೆ
ಅಗಾಧ ಅಲೆಗಳ ಕಡಲು ,
ಮುಗಿಯದ ಮರಳು ಸಾಲು
ಇನ್ನು ಹೊಸ ಹೊಸ ಜಾಗಗಳ ಶೋಧಿಸೋಣ ..
ಬಾ ಒಮ್ಮೆ ಗೆಳೆಯ..
ಮಗದೊಮ್ಮೆ ಬಾ ನನ್ನೊಟ್ಟಿಗೆ
ಪ್ರೀತಿಯ ಬಾಳುವೆಯ ಕನಸನ್ನು ನನಸಾಗಿಸೋಣ
ಒಲವನ್ನು ಬಣ್ಣಿಸಲು
ಭಾವಗಳು ತವಕಿಸುತ್ತಿವೆ ..