Friday, November 30, 2012

ಪಯಣ ...



ಬಾ ಒಮ್ಮೆ ನನ್ನ ಜೊತೆ ..
ಕಳೆದ ಬಾಲ್ಯ- ಕಲಿತ ಶಾಲೆ , 
ಆಡಿದ ಅಂಗಳ -ಪ್ರೀತಿಯ ಗೆಳೆಯರು,
ಬಿರು ಮಳೆ - ಕಪ್ಪು ಬಂಡೆಗಳ ಹಾಸು..
ಎಲ್ಲ ವಿವರಿಸುವೆ ..




ಹಸಿರು ತೋಟ, ಪುಟ್ಟ ಕಾಲುವೆ
 ಎಲ್ಲ ಸುತ್ತುವಾಸೆ ನಿನ್ನೊಂದಿಗೆ 

ಅಗಾಧ ಅಲೆಗಳ ಕಡಲು ,
ಮುಗಿಯದ ಮರಳು ಸಾಲು 
ಇನ್ನು ಹೊಸ ಹೊಸ ಜಾಗಗಳ ಶೋಧಿಸೋಣ ..
ಬಾ ಒಮ್ಮೆ ಗೆಳೆಯ..
ಮಗದೊಮ್ಮೆ ಬಾ ನನ್ನೊಟ್ಟಿಗೆ 
ಪ್ರೀತಿಯ ಬಾಳುವೆಯ ಕನಸನ್ನು ನನಸಾಗಿಸೋಣ 

ಒಲವನ್ನು ಬಣ್ಣಿಸಲು 
ಭಾವಗಳು ತವಕಿಸುತ್ತಿವೆ  ..

No comments:

Post a Comment