
ನೀರಸ ಯಾಂತ್ರಿಕ ಬದುಕಿಗೊಂದು ಅಲ್ಪ ವಿರಾಮ ಒದಗಿಸಿತ್ತು , ಆ ಮುದ್ದು ಕಿಲ ಕಿಲ ನಗು ಎಂದರೆ ಉತ್ಪ್ರೇಕ್ಷೆ ಆಗಲಾರದೇನೋ .. ದಣಿದ ಮನಗಳಿಗೆ ಮುದ ನೀಡಿದ್ದವು ಆ ಕೆಲ ನಿಮಿಷಗಳು.. ಮುಗ್ಧ ಮುಖ, ಹುರುಪಿನ ವ್ಯಕ್ತಿತ್ವ , ಶುಭ್ರ ಹಾವಭಾವ .. ಎಂಥ ಸುಂದರ ಘಳಿಗೆಗಳು ... ಅಂಥ ಕಿಕ್ಕಿರಿದ್ದ ಬಸ್ ಅಲ್ಲಿ ಮಧುರ ಕಲರವ .. ಸುಳಿವಿಲ್ಲದೆಯೇ ನೆರೆದಿರುವ ಮುಖಗಳಲ್ಲಿ ನಗುವಿನ ದರ್ಶನ .. ಯಾರೋ ಕೇಳಿದರು ಆ ಮಗುವನ್ನ , "ನಿನ್ನ ಹೆಸರೇನಮ್ಮ??" .. ಅವಳು ಹೇಳಿದಳು "ಹೇ ಹೇ ..ನನ್ನ ಹೆಸರು ಗುಂಡಮ್ಮ .." .. ಏನೋ ಖುಷಿಯ ಅಲೆಗಳನ್ನ ಎಬ್ಬಿಸಿದವು ಆ ಚುಟುಕಾದ, ಚುರುಕಿನ ಪ್ರತ್ಯುತ್ತರ .. ಸುಡುಬಿಸಿಲಿನಲ್ಲಿ ತಂಗಾಳಿಯ ಅನುಭವ ಆದ ಹಾಗೆ.. ಟ್ರಾಫಿಕ್ ಇಂದ ಬೇಸತ್ತ ಜನರಿಗೆ ಏನೋ ಮನರಂಜನೆ.. ಆ ಪುಟ್ಟಮಕ್ಕಳ ಜಗಳ, ಮಾತುಕತೆ, ತುಂಟ ಪ್ರಶ್ನೆಗಳ ಸರಮಾಲೆ, ಕಲ್ಪನಾ ಲೋಕಗಳ ಅನುಭೂತಿ ಇಂದ ವಂಚಿತಳಾದ ಹಾಗೆ ಅನಿಸುತ್ತಾ ಇತ್ತು ..ನನಗೆ ಅವರ ಹತ್ತಿರದ ಸೀಟ್ ಸಿಗದೇ ಹೋದ್ದರಿಂದ ...ಮಕ್ಕಳು ಬಸ್ ಇಳಿದು ಹೋದಾಗ ಮತ್ತೆ ಉದಾಸ ಭಾವ ಮುತ್ತುಕೊಳ್ಳುವಂತೆ ಭಾಸವಾಗ್ತಾ ಇತ್ತು ..
ಅವರು ಕೆಳಗೆ ಇಳಿದು ಹೋಗುವಾಗ ಒಂದ್ಸಲ ಪ್ರೀತಿಯಿಂದ ಒಬ್ಬಳ ಮುಖವನ್ನ ಸವರಿದಾಗ ಆ ಸ್ಪರ್ಶ " miss you ಪುಟ್ಟಿ " ಅಂತಾ ಹೇಳಿದ್ದು ಮಗುವಿಗೆ ಅರ್ಥವಾಗಿರಲಿಕ್ಕಿಲ್ಲ .. ಅವರ ಹತ್ತಿರ ಕುಳಿತಿದ್ದ ನನ್ನ ಗೆಳತಿ ಒಬ್ಬಳು ಹೇಳಿದಳು , ಎಷ್ಟು ಚೆಂದ time ಪಾಸು ಆಯ್ತು ಗೊತ್ತ ಅಂತಾ .. ಒಬ್ಬ ಮಗು ಹೇಳ್ತಿದ್ಲಂತೆ, ನಾನು ಮನೆ ಕಟ್ಟಿಸ್ತೀನಿ ಅಂತಾ.. "ಹೌದಾ, ಹೇಗೆ?" .. "ಏನಿಲ್ಲ ಗೋಡೆ, ನೆಲ, ಬಾತ್ ರೂಂ , ಅಡ್ಗೆ ಮನೆ ಮಾಡಿದ್ರಾಯ್ತು .. " .. " ಒಹ್, ಹೇಗೆ ಅದನ್ನೆಲ್ಲ ಜೋಡಿಸ್ತಿಯ ..? " .." ಏನಿಲ್ಲ , ಫೆವಿಕೊಲ್ ದು ಒಂದು machine ತರ್ತೀನಿ, ಅದು ಎಲ್ಲಾ ಮಾಡಿಬಿಡುತ್ತೆ .."
ನಮಗೆ ಅಂಥ ಮುಗ್ಧ ಭಾವನೆಗಳು ಮತ್ತೆ ಬರಲಾರವೇನೋ ... :( ... जाने कन्हा गए वो दिन ...
No comments:
Post a Comment