Wednesday, April 25, 2012

ಮೋಡಗಳ ಮೇಳದಲ್ಲಿ ಮರೆಯಾಗುವ ಚೆಂಡು ನೀನಲ್ಲ ..
ಮತ್ತೆ ಮತ್ತೆ ಬೆಳಕನ್ನು ಚೆಲ್ಲುವ,
ಮಳೆ ಸುರಿಸುವ ಶಕ್ತಿವಂತ..
ಕಾಲದ ತೆಕ್ಕೆಗೆ ಸಿಕ್ಕಿ ಚೂರಾಗಲೊಲ್ಲೆ..
ಸಾವಿರ ಮನೆ -ಮನಗಳ ಬೆಳಗುವ ಪ್ರಭಾವಿ .
ದಿನ ಬೆಳಗುವುದೇ ನಿನ್ನ ನಗುವಿಂದ ..
ನಿನ್ನ ಅಗಲುವಿಕೆ ಕ್ಷಣಿಕ, ಸಹಜ .
ಮತ್ತೆ ನಾಳೆಗಳನ್ನು ಹೊತ್ತುತರುವುದೇ ಕಾಯಕ ..

No comments:

Post a Comment