Thursday, June 16, 2011

ಹೇಗಾದೆ ..??



ಅರಸದೆ,
ದಾರಿಯಲ್ಲಿ ಸಿಕ್ಕ ಆಗಂತುಕ ನೀನು ..
ಅಚ್ಚರಿ ಪಟ್ಟಿರಲಿಲ್ಲ ನಾನು ..
ಪದಪುಂಜಗಳಿಂದ ರಮಿಸುವ
ಕವಿ ನೀನಾಗಲಿಲ್ಲ..
ನಿತ್ಯ ಕಂಡು ಸ್ವಾಗತಿಸುವ
ರವಿ ನೀನಾಗಲಿಲ್ಲ ..
ತಂಪು ಸೂಸಿ ಕಾವ್ಯ ಪಸರಿಸುವ
ಶಶಿ ನೀನಾದೆ ..
ಭಾವನೆಗಳ ಗೆಲ್ಲುವ
ಶೂರ ನೀನಾಗಲಿಲ್ಲ ..
ಮದದಿಂದ ಗೆಲ್ಲುವ
ಧೀರ ನೀನಾಗಲಿಲ್ಲ ..
ತುಂಬುಗಣ್ಣಿನ ಬಿಳಿ ಹವಳಗಳ ನಗುವಿನ
ಮೌನಿ ನೀನಾದೆ ..
ಪ್ರೇಮಗಾನದ ಒಡೆಯ
ನೀನಾಗಲಿಲ್ಲ ..
ಹೃದಯ ವೀಣೆಯ ಮೀಟಿದ
ನಾಯಕ ನೀನಾದೆ ..
ಏನಾದೆ ಏನಿಲ್ಲಗಳ
ಪರಿವೆ ನನಗಿಲ್ಲ ..
ಜೀವಕ್ಕೆ ಅಂಟಿದೆ,
ಜಂಟಿಯಾದೆ..
ನೀನೇ ನಾನಾದೆ..?
ನಾನೇ ನೀನಾದೆ.. ?

3 comments:

  1. ನೀನು ಅವನಿಗೆ ಒಲಿದಿರುವುದು ಸ್ಪಸ್ಟ
    ಆದರೆ ಅವನರೆಂಬುವುದು ಅಸ್ಪಸ್ಟ!!!!

    Nice one:-)

    ReplyDelete