Friday, February 5, 2010

ಏನಿದೆ?? (31-01-07)

ಮನದೊಳಗೇನಿದೆ....??
ಇದೊಂದು ಪೆಟ್ಟಿಗೆಯೇ??
ಕಂತೆ ಕಂತೆ ನೆನಪುಗಳು...
ಹತ್ತು ಹಲವು ನೋವುಗಳು......
ಬಣ್ಣ ಬಣ್ಣದ ಸವಿಗನಸುಗಳು.....
ಹಂಬಲಿಸದ ರಹಸ್ಯಗಳು......
ಪ್ರೀತಿಯ ಭಾವನೆಗಳು....
ಇನ್ನೂ ಲೋಕವನ್ನು ಕಾಣದ ಬಗೆ ಬಗೆಯ ಯೋಚನೆಗಳು....,
ಅಸಹಾಯಕತೆಯನ್ನು ಪ್ರತಿಧ್ವನಿಸುವ ವಿಚಾರಗಳು.....

ಏನಿಲ್ಲ ಇದರಲ್ಲಿ...??
ಅದರ ಗಾತ್ರವೇನು??
'ಮನ'ದ ಅವಕಾಶವೆಷ್ಟು ....??

ಯಾರು ಬಲ್ಲರು ಇದರ ರಚನೆಯನ್ನು...??
ಯಾರು ಅಳೆವರು ಇದರ ಸಾಮರ್ಥ್ಯವನ್ನು...??
ದಿನದಿನಾಲು ಪರೀಕ್ಷೆ ಬರೆಯುವಾಗ,
ಪಲಿತಾಂಶದ ಬಗ್ಗೆ ಚಿಂತೆಯಿರದೆ??

ಎಲ್ಲವನ್ನೂ ತನ್ನಲ್ಲಿ ಹುದುಗಿರುವ ಇದರ ಶಕ್ತಿ ಎಷ್ಟು?

3 comments:

  1. Nice way of expressing the so called mind...
    chendaagi baradde..
    ಕಂತೆ ಕಂತೆ ನೆನಪುಗಳು...
    ಹತ್ತು ಹಲವು ನೋವುಗಳು...
    ಹಂಬಲಿಸದ ರಹಸ್ಯಗಳು......
    shabdagala jodane tumba hidistu nange...
    ....... we can fill anything we want na in this blanks..Like that our mind also...whatever we fill in it, we get such kind of thoughts, actions and all....

    ReplyDelete
  2. ನೆನಪುಗಳು.. ನೋವುಗಳು.. ಭಾವಗಳು... ಮನಸ್ಸೆಂಬ ಪೆಟ್ಟಿಗೆಗಳು! ನಾವುಗಳು! ನೀವುಗಳು!
    ತುಂಬಾ ಸಂತೋಷ ಕೊಡ್ತು!
    ನಿಮಿಗೆ ಹೇಗೆ ಅನ್ನಿಸುತ್ತೋ ತಿಳಿಯದು ಆದರೆ 'ಪಂಚರಂಗಿ' ಚಿತ್ರದ ಭಾವಗಳು ಇಲ್ಲಿ ಕಂಡದ್ದು ಒಂದು ಥರ ಆಹ್ಲಾದ ಎನಿಸಿತು. ಅದರೊಟ್ಟಿಗೆ ಇರುವ ಮಗುವಿನ ಚಿತ್ರ ತುಂಬಾ ಪೂರಕವಾಗಿದೆ.
    ಮುಂದು ವರಿಸಿ ಭಾವಗಳ ಅಭಿವ್ಯಕ್ತಿಯನ್ನು!

    ReplyDelete
  3. ಧನ್ಯವಾದಗಳು .. ನೀವು ಪಂಚರಂಗಿ ನೆನಪಿಸಿಕೊಂಡು ಖುಷಿ ಪಟ್ಟಿದ್ದಕ್ಕೆ ನನಗೂ ಖುಷಿ ಆಯ್ತು :) ...

    ReplyDelete