Friday, February 5, 2010

Thoughts on 11-05-08


ಯಾಕೆ ನಾನು ಹೀಗೆ ?? ನನ್ನ ಮಧುರ ಭಾವನೆಗಳನ್ನು ಮೃದುವಾಗಿ ಸಮಧಾನಿಸಲಾ ?? .. ಬಿರುಸಾಗಿ ನನ್ನ ಚಿಂತೆಯನ್ನು ಹೊಡೆದೋಡಿಸಲ ?? ಅವ್ಯಕ್ತ ಭಯದ ಕುರುಹುಗಳನ್ನು ಹುರಿದುಂಬಿಸಲ? ಏಕಾಂತ ಭಾವಗಳನ್ನು ಹರಿದು ಹಂಚಿ ಬಿಡಲಾ? ಎಲ್ಲ ಅಪೂರ್ಣ, ಕ್ಲಿಷ್ಟತೆಗಳನ್ನು ಅಪ್ಪಿ ಮುದ್ದಾಡಲ?? ನವಿರಾದ ಹೂ ನಗುವನ್ನು ನುಂಗಲಾ? ಮುಗ್ಧ ಮನಸ್ಸನ್ನು ಕೊಂದು ಬಿಡಲಾ? ಅಪಕ್ವ ಮನೋವಿಚಾರಗಳನ್ನು ಗಾಳಿಯಲ್ಲಿ ತೇಲಿ ಬಿಡಲಾ? ಅಸಂತುಲಿತ ಜೀವನದಲ್ಲಿ ಹೋರಾಡಿ ಸೋಲಲಾ? ನನ್ನ ಅಸ್ಪಷ್ಟ ಮನೋಭಿಲಾಷೆಗಳಿಗೆ ಅರ್ಥ ಕೊಡಲಾ? ಕಾಡುವ ವಿಕಲ ಭಾವನೆಗಳನ್ನು ಸಮಾಧಾನಿಸಲಾ?? ಹೀಗೆ ಸುಮ್ಮನೆ ಮಂಕಾಗಿ ಬಿಡಲಾ?


ಏನಿದರ ಅರ್ಥ?? ನೂರಾರು ಪ್ರಶ್ನೆಗಳನ್ನು ಕೇಳುವ ಮನಸ್ಸಿಗೆ ಯಾಕೆ ಅನಿರ್ದಿಷ್ಟತೆ ?? ಪ್ರಶ್ನೆಗಳೇ ಸುಳ್ಳಾದರೆ ಇನ್ನೆಲ್ಲಿ ಉತ್ತರಗಳಿಗೆ ಕಾಯಲಿ?? ಹುಡುಕುವ ಮನಸ್ಸಿದ್ದರೂ, ಮನಸ್ಸಿಗೆ ಆಸರೆಯ ಪ್ರಶ್ನೆಗಳ ಬರವೇ?

1 comment: